Creativity

ಮನದಂತರಾಳದ ಮನವಿಯೊಂದ ಕೇಳಿದೆ 
ನಿನಗಿಲ್ಲ ಇನ್ನೊರ್ವ ಇವನಂತ ಗೆಳೆಯ 
ಅವನ ಕಣ್ಣ ಅಂಚಲಿ ನಿನ್ನ ಬಿಂಬ ತುಂಬಿಹ 
ಬಯಸನೆಂದು ನಿನ್ನಯ ಮೊಗದಲೊಂದು ಮೌನವ 
      ಇನ್ನಿಲ್ಲ ಎಂದನು ನಿನ್ನ ಅಗಲಿ ನಾನೆಂದು 
      ಅರಿಯದಂತದನು ಮನದಲೇಕಿ ....... ಕಾತುರ ......!

                                             - ಸರಿತ 
                                               ಡಯಟ್ ಕಾಸರಗೋಡು 

ಓ ಅಣ್ಣಾ.......

ನೀ ನನಗೆ ಸಿಗಲೇತಕೆ ತಡ ಮಾಡಿದೆ ?
ನಾನೀಗ ನಿನ್ನ ಕಣ್ಗಳಲ್ಲಿ ಬಿಂಬವಾದೆ
ನೀ ನೀಡುವ ಒಲುಮೆ ನೀ ನುಡಿಯುವ ಹಿರಿಮೆ
ಅನಿಸಿದೆ ಯಾಕೋ ಇದು ದೇವರ ಮಹಿಮೆ


ನಿನ್ನ ಮನದಲಿ ಅರಳಿರುವ ಸುಮವಾಗಲೆ ನಾನು

ನಿನ್ನ ಬಾಳ ಆಗಸದಲಿ ಪುಟ್ಟನಕ್ಷತ್ರ ನಾನು
ನಿನ್ನ ಮನದ ಸಾಗರದಲ್ಲಿ ಮುತ್ತಿನ ಚಿಪ್ಪು ನಾನು

ಬೇರೇನೂ ಬೇಡವು ಬಳಿಯಿದ್ದರೆ ನೀನು.


ನೀನಾದೆ ನನ್ನ ಬಾಳಿನ ಮಿನುಗುತಾರೆ

ನಿನಗಿಹರೆ ಸಾಟಿ ಯಾರಾದರೂ ಬೇರೆ


ನಿನ್ನ ಆ ಕೈಗಳ ಕಿರು ಬೊಗಸೆಯಲ್ಲಿ

ಬಂಧಿಯಾಗಿಸಿದೆ ಎನ್ನ ಕ್ಷಣ ಮಾತ್ರದಲ್ಲಿ


ನೀನಾದೆ ನನ್ನ ಬಾಳಿನಲಿ ಮಾಸದ ರಂಗೋಲಿ

ಅಕ್ಷರವಾಗಿರುವೆ ನೀ ಮನಸಿನ ಪುಟದಲ್ಲಿ
ಬೆಳಕಾಗಿ ಬಂದೆ ನೀ ಆ ಕತ್ತಲ ಕ್ಷಣದಲ್ಲಿ

ಅಂಬಿಗನಾಗಿರು ನೀ ನನ್ನ ಬಾಳದೋಣಿಯಲಿ..



 -------ಪೂರ್ಣಿಮ ಶೆಟ್ಟಿ  ಸಿ. ಜೆ.



ಓ ನನ್ನ ಗೆಳತಿ 


"ಮನುಷ್ಯನ ಜೀವನ ಎಂಬುದು ಎಷ್ಟು ಸ್ವರಸ್ಯ ಅಲ್ವಾ...! ಎಷ್ಟೊ ಆಗುಹೋಗುಗಳು , ಹತ್ತು ಹಲವರು ಮುಖಗಳು ಪದೇ ಪದೇ ನಾಟಕದ ಪರದೆಯಂತೆ ಬಂದು ಹೋಗಿ ಬಂದು ಹೋಗಿ ಇರುತ್ತದೆ . ನನ್ನ ಜೀವನದಲಿ ಮಡಿದ ಒಂದೇ ಒಂದು ಒಳಿತಿನ ಕಾರ್ಯ ಅಂದ್ರೆ ನನ್ನ-ನಿನ್ನ ಗೆಳೆತನ . ಯಾವುದೊ ಒಂದು ಮುಸಂಜೆಯನು ಬೆಳಗಲು ಬಂದ ಪೂರ್ಣ ಚಂದಿರನಂತೆ ಅ ಒಂದು ದಿನ ನನ್ನ ಜೀವನವನ್ನು ಬೆಳಗಿಸಿದವಳು ನೀನು . ನಾನು ಯಾಕೆ ಈತರ ಬರೆಯುತಿದೇನೋ ಏನನ್ನು ಬರಯಲು ಹೊರಟಿರುವೇನೋ  ನಾನರಿಯೇ ಓ ನನ್ನ ಗೆಳತಿ . 
             ಯಾಕೆ ನನ್ನ ಹೀಗೆ ಪದೆ ಪದೆ ಕಾಡುತೀಯ? ಜೀವನವೇ ಸಾಕೆಂಬ ನೆಲೆಯಲಿದ್ದ  ನನ್ನ ಕೈ ಹಿಡಿದು ನಡೆಸಿದವಳು ನೀನು ಜೀವನದುತ್ಸಹವನು  ನನ್ನಲಿ ತುಂಬಿದವಳು ನೀನು . ಅಷ್ಟಕ್ಕೂ ಯಾರು ನೀನು? ಎಲ್ಲಿಂದ ಬಂದೆ?  ನನಗೇನು ತಿಳಿಯದು ಆದರೆ ಒಂದು ಮಾತ್ರ ಗೊತ್ತು ಅದು ನಿನ್ನ ಗೆಳೆತನ ಅದಿಲ್ಲದೆ ನನ್ನಿಂದ ಜೀವನ ನಡೆಸಲು ಕಸ್ಟಸಾದ್ಯ . ಯಾವದೋ ಒಂದು ಮಳೆಗೆ ನನ್ನ ಕೊಡೆಯಡಿಗೆ ಸೇರಿದವಳು ನೀನು . ಮಳೆ ನಿಂತ ಮೇಲು ನೀ ನನ್ನ ಬಿಟ್ಟು ಹೋಗಲಿಲ್ಲ. ನಿನ್ನ ನಾ ಅರ್ಥೈಸಲು ಬಹಳ ತಡಮಾಡಿದೆ , ನಿನ್ನೊಂದಿಗಿನ ಈ ಎರಡು ವರುಷ ಎಂದಿಗೂ ಮುಗಿಯದೆ ಇರಲಿ. "


ಸಂಚು!
*******

ಅವಳ ಕಣ್ಣಂಚು
ಬಳುಕುವ ಕೋಲ್ಮಿಂಚು
ಆ ಮುಂಗುರುಳ ಕೆಂಚು
ಕತ್ತಿಯ ಕೊನೆಯಂಚು
ಆದರೇನು ?
ನಾನು ತಿಳಿಯದಾದೆ
ಅವಳ ಆ ಸಂಚು!!

                                                                    -ಪೂರ್ಣಿಮಾ ಶೆಟ್ಟಿ,,
ಡಯಟ್ ಕಾಸರಗೋಡು,, ಮಾಯಿಪ್ಪಾಡಿ. 


ಹೂಮಳೆ!
********

ಕೋಗಿಲೆಯ ದನಿಗೆ ಸ್ವರ ಸೇರಿಸಲೇ
ಅರಳುವ ಸುಮದಿ ಮಧುವಾಗಲೇ
ಸೂರ್ಯನ ಕಿರಣವ ಸೆರೆಹಿಡಿಯಲೇ
ಹಾರುವ ಹಕ್ಕಿಯ ಗರಿಯಾಗಲೇ
ಲತೆಯೆಡೆಯಲಿ ನಗುವ ಮಲ್ಲಿಗೆ ನಾನಾಗಲೇ
ಏನಾಗಲಿ ನಾನು ಅಲೆದಿಹೆನು ತಿಳಿಯದಲೆ
ಯಾರು ಸುರಿವರು ಇದಕೆ ಪ್ರೀತಿಯ ಹೂಮಳೆ?

- ಪೂರ್ಣಿಮಾ ಶೆಟ್ಟಿ,

ಡಯಟ್ ಕಾಸರಗೋಡು, ಮಾಯಿಪ್ಪಾಡಿ.

ಧರೆಯ ಕೂಗು!..........
**************************

ಇಳೆಯು ದಾಹದಿ ಬೆಂದಿಹುದು
ಮಣ್ಣಿನ ಕಂಪಿದು ಮಾಸಿಹುದು
ಬರಗಾಲ ನಕ್ಕು ಕರತಾಡನ ಗೈಯುತಿರೆ
ಅಂತರ್ಜಲ ಬತ್ತಿ ಸಾವು ಕಂಡಿಹುದು||

ಗದ್ಗತಿತ ಕಂಠದಲಿ ಧರೆಯು ಕೂಗುತಿರೆ
ತೃಷೆಯಿಂದ ಬಳಲಿಹೆನು ನೀರು ಕೊಡು ಎನುತಿರೆ
ಮೋಡಗಳ ತಾತ್ಸಾರ ಕಂಡು ಬೆರಗಾಗುತಿರೆ
ತೋರಿಸಬಾರದೇ ಮಳೆ ಬರುವ ಚಹರೆ ||

ದಿನದಿನವು ಏರಿಹುದು ಸೂರ್ಯನ ಭುಗಿಲು
ಕನಿಕರವ ತೋರದೇ ಆ ಬಾನ ಮುಗಿಲು
ಬಾಡಿಹುದು ಅರಳುವ ಹೂವಿನ ಎಸಳು
ಇನ್ನೆಷ್ಟು ಕಾಲವು ಈ ಭೂಮಿ ನಗಲು ||
-ಪೂರ್ಣಿಮ ಶೆಟ್ಟಿ,,,,,
|| year D.Ed
DIET Kasaragod,,,Maipady.. 



ಬದುಕು 

                   ಬದುಕಿನಲ್ಲಿ ಒಂಟಿ ಭಾವನೆ ಕಾಡುವುದು ತನಗಾರೂ ಇಲ್ಲ ಎನ್ನುವ ಅಂಕುರವೊಂದು ಮನಸ್ಸಿನಲ್ಲಿ ಮೂಡಿದಾಗ . ತನಗರಿವಿಲ್ಲದೆಯೇ ಸೋಲು - ಗೆಲುವುಗಳ ಡೊಂಬರಾಟದಲ್ಲಿ ಆಸೆ ಎಂಬ ಒಂಟಿಬಳ್ಳಿಯಲ್ಲಿ ಜಿಗುಪ್ಸೆ-ಹತಾಶೆ ಎಂಬ ಎರಡೂ ಕೈಗಳನ್ನು ಮುಂದೆ ಚಾಚಿ ಗುರಿ ತಲುಪುವುದೇ ಜೀವನ.  
                    ಈ ಜೀವನದಲ್ಲಿ ಪರಿಚಯವಾಗುವವರೆಷ್ಟೋ  , ಇನ್ನು ಅಪರಿಚಿತರೆಷ್ಟೋ , ಇನ್ನು ಪರಿಚಯವಗಿಯೂ ಅಪರಿಚಿತರಂತೆ ಉಳಿದವರೆಷ್ಟೋ ಅಂತ ತಿಳಿಯುವುದು ಅತೀ ಕಷ್ಟ . ಚಿಂತನಾ ಕಡಲಿನಲ್ಲಿ ಮಂಥನ ನಡೆಸಿದಾಗ ಸಿಗುವ ಅಮೃತದಂಥ ಲಹರಿ ವಿಷಯತೀತ. ಹ್ವದು ಯಾರಿಗೆ ಯಾರು ಶಾಶ್ವತವಲ್ಲ. ಜೀವನವೆಂಬ ಕಡಲಿನಲ್ಲಿ ಒಂದಷ್ಟು ಕಾಲ ಈಜಾಡಿ, ದೈಥ್ಯಮೀನುಗಳಂಥ ಕಷ್ಟಗಳೊಂದಿಗೆ  ಸೆಣಸಾಡಿ, ನಲಿದಾಡುವ ಕಡಲ್ಚಿಪುಗಳ ಜೊತೆ ಕುಣಿದಾಡಿ, ತನ್ನ ಬದುಕಿಗೆ ಪೂರ್ಣಸಮಯದಲ್ಲಿ ಎಲ್ಲವನ್ನೂ ಮರೆಯುವ ಈ ಮನುಷ್ಯಜಾತಿಗೆ ಹುಟ್ಟು-ಸಾವುಗಳ ನಡುವೆ ಸಿಗುವ ಪುಟ್ಟ ಹೃದಯದ ಪುಟ್ಟ ಜೀವಿಗಳೇ ಆಸರೆ. ತನಗರಿವಿಲ್ಲದಂತೆಯೇ  ತನ್ನ ಜೀವನದಲ್ಲಿ ಮೂಡುವ ಹಲವಾರು ಉತ್ತರರಹಿತ ಪ್ರಶ್ನೆಗಳಿಗೆ ಯಾರ್ಯಾರೋ ಉತ್ತರ ನೀಡುತ್ತಾರೆಂಬ ಹಂಬಲದಲ್ಲಿ ಮನುಷ್ಯ ಬದುಕುತ್ತಾನಾದರೂ ಸಾಯುವವರೆಗೂ ಅದೇ ಹಂಬಲದಲ್ಲಿ, ನಿರ್ಜೀವ ವಿಶ್ವಾಸದಲ್ಲಿಯೇ ಬದುಕಲು ಪ್ರಯಥ್ನಿಸುತ್ತನೆ. 
                                                                                            

                                                                                                    - ಪೂರ್ಣಿಮಾ ಶೆಟ್ಟಿ 
                                                                    D.Ed                                                                     


ಬಾಳೊಂದು ಬಾಳೆ ಎಲೆ
ಕನಸೊಂದು ಪ್ರಿತಿಯತಿನಿಸು
ಹಂಚಲು ನೀ ಆ ಸ್ನೇಹದ ತಿನಿಸು.
                                          - ದೇವಾನಂದ
                                              D.Ed ಕನ್ನಡ
                                             ಡಯಟ್ ಮಾಯಪ್ಪಾಡಿ 

ಪ್ರತ್ಯುತ್ತರ 
ಚೆಲುವೆಯ ನೋಡುತಾ ಚೆಲುವನೆಂದನು 
ನೀನೊಂದು " ಮಿನುಗು ನಕ್ಷತ್ರ "
ಚೆಲುವೆಯು ಮುಖ ತಿರುಗಿಸುತ್ತ ಹೇಳಿದಳು 
" ಮರೆತಿದೆಯೆ ನಿನಗೆ ನಿನ್ನೆ ನೀಡಿದ 'ಕಪಾಳ ಮೋಕ್ಷ '. 

- ದೇವಾನಂದ . ಕೆ 

ಡಯಟ್ ಕಾಸರಗೋಡು , ಮಾಯಪ್ಪಾಡಿ 


ಚುಟುಕು 
"ಎಲ್ಲೆಡೆ ಹರಡಿದೆ ಗುಮಾನಿ ... ಏನೆಂದರೆ ... 
ಏರಿದೆ ಪೆಟ್ರೋಲಿಗೆ ಮನಿ 
ಮೋದಿ ಆದುದರಿಂದ ಪ್ರಧಾನಿ 
ಹಳಿಯುವೆ ಅವರನು ಯಾಕೆ ನೀ 
ತುಂಬ ಬೇಡವೇ ಅವರು ಹಳೆಯ ಸರಕಾರದ ಖಜಾನಿ .. "


                                                    - ದೇವಾನಂದ .ಕೆ 

                                                         ಡಯಟ್ ಕಾಸರಗೋಡು 



ಏಕಾಂಗಿಯದೆನಾ ಅರಿಯದೆ ಏಕಿನ್ನೂ 
ಅರಿಯುವ ಹಂಬಲವು ನೀನಗೇಕೆ ಬೇಕಿನ್ನು 
ಅಗಲಲು ಬಯಸಿರುವೆ, ಅಗಲಿರಲು ನಾ ಕಲಿವೆ 
ಹಗಲಿರುಳ ಬೇಗೆಯು ಸುಡುದಿಂದು ಮನವನು 
ಆತ್ಮ ವಿರದ ಮನಸಿನ್ನು ಏಕೆ ಅಳುಕ ಬೇಕಿನ್ನು 
ಆತ್ಮ ವಿರದ ದೇಹವೊಂದು ಭೂಮಿ ಗೇಕೆ ಭಾರವು 
ದೇಹ ಬಯಸಿ ಆತ್ಮ ವ ಇನ್ನೂ ಕಾದು ಕುಳಿತಿರಲು 
ಬರುವೆಯೆಂಬ ಹಂಬಲದಿ ನಾನೀರುವೆ ಮುಂದಿನ್ನು 
ನೀ  ಬರದೆ ಹೋದರೆ ನಾನಿಲ್ಲ ಮುಂದಿನ್ನು 
ಆತ್ಮ ವಿರದ ದೇಹವೆಕೆ ಭುಮಿಯಲೊಂದು ಭಾರವಾಗಿ .  

Saritha 
DIET KASARAGOD,
MAIPADY























                                   POEM

TEACHER 
My teacher is so pretty
he is also very smart
he is not old
he is slim and tall
and look like a doll. 

MY ENGLISH TEACHER
My English teacher is so smart
and also good
He is fat and tall
and look like handsome
He is strict like a police
But he has a heart of gold
and also he funny. 

SONG 

WHAT DO YOU SAY 
White cat, white cat, what do you say
I say Meow, Meow, Meow, Meow
in my style. 
Brown dog, brown dog, brown dog what do you say
i say bow, bow, bow, bow, 
in my style.
Red cow red cow what do you say
i say Amba, Amba, Amba 
in my style.
Black crow black crow what do you say
i say kha, kha, kha ,kha 
in my style
Green Hen, green hen what do you say
i say kho kho kho kho 
in my style. 

                                             -Swathi M.G

GOOD FRIENDS (story)
There was a big tree. In that tree crow was lived with its baby. Other birds of that tree are also become close friends of crow.
                  One day all birds went in the hunt of food. At that times crows baby was alone in the nest , suddenly a snake climbed into the tree, and went to the nest. Crow's baby frightened, when the snake attempt to eat the crow's baby a eagle, which was flying in the sky saw the snake and came to help the crow's baby.
            Eagle Killed the snake and ave crow's baby from danger. When the other birds came bake they saw the Eagle. Then the Eagle told the Story after that they became good Friends.   
                                                  -Ashalatha.  
 
 

No comments:

Post a Comment