Friday, December 19, 2014

DIET SPORTS MEET 2014-15
ಡಯಟ್ ೨೦೧೪-೧೫ ನೇ ಸಾಲಿನ ಆಟೋಟ ಸ್ಪರ್ದೆಯು ತಾರೀಕು 19/12/14 ರ ಶುಕ್ರವಾರ ಜರಗಿತು. ಕಾರ್ಯಕ್ರಮದ ಉದ್ಗಟನೆ ಯನ್ನು ಪ್ರಾಂಶುಪಾಲರು Dr. P.V. Krishnakumar ರವರು ನೆರವೆರಿಸಿದರು. senior lecture ಆದ ಸುರೇಶ್ ಅವರು ಅಧ್ಯಕ್ಷ ಸ್ಥಾನ ವಹಿಸಿದರು. 






Friday, October 24, 2014

ಕೇರಳ ಕೃಷಿ ಸಚಿವ @ ಡಯಟ್

ಕೇರಳದ ಸನ್ಮಾನ್ಯ ಕೃಷಿ ಸಚಿವ ಕೆ.ಪಿ. ಮೋಹನನ್ ಇಂದು ಡಯಟ್ ಕಾಸರಗೋಡು ಗೆ ಆಗಮಿಸಿದರು. ಕಾರ್ಯಕ್ರಮದ ಉದ್ಗಾಟನೆ ಯನ್ನು ಒಂದು ಗಿಡ ನಡುವಮುಲಕ ನೆರವೇರಿಸಿದರು. 



 

Tuesday, October 21, 2014

wish you a very happy diwali 2014 happy festival enjoy the maximum

Monday, October 20, 2014

ಡಯಟ್ - ಅದ್ಯಾಪಕರ ಕೊರತೆ

ಕಾಸರಗೋಡು ಡಯಟ್ ಮಾಯಿಪ್ಪಾಡಿ ಯಲ್ಲಿ ಅದ್ಯಾಪಕರ ಕೊರತೆ ಮತೊಮ್ಮೆ ತಲೆದೂರಿದೆ 1 & 2ವರ್ಷದ ಕನ್ನಡ ವಿದ್ಯಾರ್ಥಿಗಳಿಗೆ 10 ಪಾಠಗಳಿಗೆ ಕೇವಲ ಒಬ್ಬ ಅದ್ಯಾಪಕ ಮಾತ್ರ. 1 ಮತ್ತು 3ನೇ ಸೆಮೆಸ್ಟರ್ ಗಳು ಹತ್ತಿರಬಂದಂತೆ ಈ ಸಮಸ್ಯೆಯೂ ಬಹಳ ತೊಂದರೆಯನ್ನುಂಟು ಮಾಡುತ್ಹಿದೆ ಎಂದು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದರೆ. ಕೇರಳ ಸರಕಾರವು ಕನ್ನಡ ವಿದ್ಯಾರ್ಥಿಗಳ ಮೇಲೆ ನಡೆಸುತಿರುವ ಈ ದಬ್ಭಾಲಿಕೆಗೆ ಕೊನೆಯಾದರು ಇಲ್ಲವೇ? ಸರಕಾರ ಇನ್ನಾದರೂ ನಿದ್ದೆ ಯನ್ನು ತ್ಯಜಿಸದಿದ್ದಲಿ ಕಾಸರಗೋಡು ಕನ್ನಡ ನಾಡುಯೆಂಬುದುದನ್ನು ಮರೆತು ಬಿಡಬೇಕಷ್ಟೇ.

ನಾಣ್ಯ ಪ್ರದರ್ಶನ @ ಡಯಟ್ 

ಡಯಟ್ ಕಾಸರಗೋಡು 2nd year D.Ed ಕನ್ನಡ ಅದ್ಯಾಪಕ ವಿದ್ಯಾರ್ಥಿಗಳಿಂದ ವಿವಿದ ನಾಣ್ಯ ಸಂಗ್ರಹ ಹಾಗು ಪ್ರದರ್ಶನ ಜರಗಿತು . ಕಾರ್ಯಕ್ರಮದ ಉದ್ಗಾಟನೆ ಯನ್ನು ಡಯಟ್ ಸೀನಿಯರ್ ಲೆಕ್ಚರ್ ಶ್ರೀಮತಿ ಜಲಜಾಕ್ಷಿ ಯವರು ನೆರವೇರಿಸಿದರು . ಸಮಾಜ ವಿಜ್ಞಾನ ಅದ್ಯಾಪಕ ಶ್ರೀ ನಾರಾಯಣ ರವರು ಉಪಶ್ಥಿತರಿದರು . 









Monday, October 13, 2014

ENGLISH CLUB CELEBRATION 

On 13th October 2014 the English club celebration was conducted by 2nd year Malayalam students at DIET Kasaragod Maipady. 


Tuesday, October 7, 2014

Monday, October 6, 2014

ಡಯಟ್ - ಅದ್ಯಾಪಕರ ಕೊರತೆ 

ಕಾಸರಗೋಡು ಡಯಟ್ ಮಾಯಿಪ್ಪಾಡಿ ಯಲ್ಲಿ ಅದ್ಯಾಪಕರ ಕೊರತೆ ಮತೊಮ್ಮೆ ತಲೆದೂರಿದೆ 1 & 2ವರ್ಷದ ಕನ್ನಡ ವಿದ್ಯಾರ್ಥಿಗಳಿಗೆ 10 ಪಾಠಗಳಿಗೆ ಕೇವಲ ಒಬ್ಬ ಅದ್ಯಾಪಕ ಮಾತ್ರ. 1 ಮತ್ತು 2ನೇ ಸೆಮೆಸ್ಟರ್ ಗಳು ಹತ್ತಿರಬಂದಂತೆ ಈ ಸಮಸ್ಯೆಯೂ ಬಹಳ ತೊಂದರೆಯನ್ನುಂಟು ಮಾಡುತ್ಹಿದೆ ಎಂದು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದರೆ. ಕೇರಳ ಸರಕಾರವು ಕನ್ನಡ ವಿದ್ಯಾರ್ಥಿಗಳ ಮೇಲೆ ನಡೆಸುತಿರುವ ಈ ದಬ್ಭಾಲಿಕೆಗೆ ಕೊನೆಯಾದರು ಇಲ್ಲವೇ?  ಸರಕಾರ ಇನ್ನಾದರೂ ನಿದ್ದೆ ಯನ್ನು ತ್ಯಜಿಸದಿದ್ದಲಿ ಕಾಸರಗೋಡು ಕನ್ನಡ ನಾಡುಯೆಂಬುದುದನ್ನು ಮರೆತು ಬಿಡಬೇಕಷ್ಟೇ.   

Friday, September 26, 2014


<<<1st year D.Ed Kannada present a Sahitya Sahbe on 26/09/2014>>>

Congratulations to Thulasai
ಕಾಸರಗೋಡು ಸರಕಾರಿ ಕಾಲೇಜುವಿನಲ್ಲಿ ದಸರಾ ನಾಡ ಹಬ್ಬ ದ ಭಾಗವಾಗಿ  ನಡೆಸಿದ ಭಾವಗೀತೆ ಸ್ಪರ್ಧೆ ಯಲ್ಲಿ ದ್ವಿತೀಯ ವರ್ಷ D.Ed ಕನ್ನಡ ವಿಭಾಗದ ತುಳಸಿ ಯವರು ತ್ರಿಥಿಯ ಸ್ಥಾನ ಪಡೆದಿರುವರು ...

ಇವರಿಗೆ ಡಯಟ್ ಫ್ರೆಂಡ್ಸ್ ಕ್ಲಬ್ ನ ಭಾಗವಾಗಿ ಅಭಿನಂದನೆಗಳು ....!!!

Thursday, September 4, 2014

ONAM SPECIAL @ DIET

ತಾರೀಕು 4/9/2014 ರಂದು ಡಯಟ್ ಕಾಸರಗೋಡು ನಲ್ಲಿ ಅದ್ಯಾಪಕ ವಿದ್ಯಾರ್ಥಿಗಳಿಂದ ಓಣಂ ಹಬ್ಬದ ಸಲುವಾಗಿ ಪೂಕಳಂ , ಹಾಗು ವಿವಿದ ಸ್ಪರ್ದೆಗಳನ್ನು ಅಯೋಗಿಸಲೈತು. 









Wednesday, September 3, 2014

2nd year D.Ed Kannada Students celebrated BIRTH DAY on the basis of English culture.




ಪ್ರಥಮ ವರ್ಷ D.Ed ಕನ್ನಡ ವಿದ್ಯಾರ್ಥಿಗಳಿಂದ flower show ತಾರೀಕು ೩/೦೯/೨೦೧೪ ರಂದು ಜರಗಿತು







Monday, September 1, 2014

ತಾರೀಕು 1/09/2014 ರ ಸೋಮವಾರ ದಂದು ಡಯಟ್ ಕಾಸರಗೋಡುನಲ್ಲಿ ಅದ್ಯಾಪಕ ವಿಧ್ಯಾರ್ಥಿಗಳಿಂದ 2014-15 ಸಾಲಿನ ಪಾರ್ಲಿಮೆಂಟ್ ಚುನಾವಣೆಯು ಬಹಳ ಉತ್ಸುಕತೆಯಿಂದ ಜರಗಿತು. ಬೆಳಗ್ಗೆ 10.30 ಕ್ಕೆ ಚುನಾವಣೆ ಆರಂಭವಾಗಿ ಮಧ್ಯಾನ 1.00 ರ ವೇಳೆಗೆ ಕ್ಯಾಬಿನೆಟ್ ರೂಪುಗೊಂಡಿತು. ಪ್ರೊ ಟೈಮ್ ಸ್ಪಿಕೆರ್ ಪ್ರೇಮಾ ರವರು ನೆಹಿಮಾ ರವರಿಗೆ ಪ್ರಮಾಣ ವಚನ ಭೋದಿಸಿದರು. ಬಳಿಕ  ಪ್ರಧಾನ ಮಂತ್ರಿ ಹಾಗು ಉಳಿದ ಮಂತ್ರಿಗಳು ಸ್ಪೀಕರ್ ರವರಿಂದ ಪ್ರಮಾಣ ವಚನ ಸ್ವೀಕರಿಸಿದರು .    
DIET Cabinet 2014-15....!
Speker                                 :Nehima K (2nd D.Ed Kan)
Dept Speker                         :Mubashira (1st D.Ed Mal)
Prime Minister                      :Sonu T.D
Dept Prime Minister             :Anitha (1st year D.Ed kan)
Finance Minister                 :Nowfal (2nd D.Ed Mal)
Dept Finance minister         :Swetha (1st D.Ed kan)
Agriculture Minister             :Shylesh M (2nd D.Ed Kan)
Dept Agriculture Minister    :Ranjusha (1st D.Ed Mal)
Educational Minister           :Aneesh Kumar (2nd D.Ed Mal)
Dept Educational Minister :Suchitra Rai (1st D.Ed Kan)
Health Minister                  : Vidhya M (2nd D.Ed Kan)
Dept Health Minister         : Farhana (1st D.Ed Mal)
Secretary                          : Devananda K & Mayamayuri ( 2nd D.Ed Kan & Mal)
Watch & ward                    : Chethana Kumari & Amrutha (2nd Kan & 1st Mal)


Friday, August 15, 2014

ಡಯಟ್ ಕಾಸರಗೋಡು, ಮಾಯಿಪ್ಪಾಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ 

ಡಯಟ್ ಕಾಸರಗೋಡು, ಮಾಯಿಪ್ಪಾಡಿಯಲ್ಲಿ ಸ್ವಾತಂತ್ರ್ಯ ದಿನದ ಅಂಗವಾಗಿ ಹಲವು ಕಾರ್ಯಕ್ರಮಗಳು ಜರಗಿತು. ಬೆಳಗ್ಗೆ 9.30 ಕ್ಕೆ ದ್ವಜರೊಹಣ, ದೇಶಭಕ್ತಿ ಗೀತೆ , ರಸಪ್ರಶ್ನೆ ಮುಂತಾದ ಸ್ಪರ್ಧೆ ಗಳು ಜರಗಿತು. ಶಿವಾಜಿ ಫ್ರೆಂಡ್ಸ್ ಕ್ಲಬ್ ನ ಭಾಗವಾಗಿ ಮಕ್ಕಳಿಗೆ ಸಿಹಿ ತಿಂಡಿ ಒದಗಿಸಲೈತು.


ದ್ರಾವಿಡ ಭಾಷೆಗಳಲ್ಲಿ ತುಳು ಭಾಷೆಗೆ ಪ್ರಧಾನ ಸ್ಥಾನವಿದೆ-
 ಡಾ. ರಘುರಾಮ್ ಭಟ್ 

                 ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಇಂದು ಸಾಹಿತ್ಯ ಕ್ಷೇತ್ರದಲ್ಲಿ ಇತರ ದ್ರಾವಿಡ ಭಾಷೆಗಳ ಹಂತಕ್ಕೆ ತಲುಪದಿದ್ದರೂ ವಿಶಿಷ್ಟತೆಯಿಂದ ತನ್ನದೇ ಆದ ಸಮೃದ್ಧವಾದ ಜನಪದ ಮತ್ತು ಇತರ ಸಾಹಿತ್ಯ ಸೃಷ್ಟಿಗಳಿಂದಾಗಿ ಇಂದು ಕೂಡ ಪ್ರಧಾನ ಸ್ಥಾನವನ್ನು ಉಳಿಸಿಕೊಂಡಿದೆ ಎ೦ದು ಡಯಟ್ ಪ್ರಾಧ್ಯಾಪಕರಾದ ಡಾ.ರಘುರಾಮ್ ಭಟ್ ಹೇಳಿದರು. ದಿನಾಂಕ 13. 08.2014ರಂದು ಮಾಯಿಪ್ಪಾಡಿ ಡಯಟಿನಲ್ಲಿ ನಡೆದ ದ್ವಿತೀಯ ವರ್ಷದ ಕನ್ನಡ ವಿಭಾಗದ ಅಧ್ಯಾಪಕ ವಿದ್ಯಾರ್ಥಿಗಳ ಸಾಹಿತ್ಯ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಈ ಸಾಹಿತ್ಯ ಸಭೆಯು 'ತುಳು ಸಾಹಿತ್ಯ ಮತ್ತು ಸಂಸ್ಕೃತಿ'  ಎ೦ಬ ಆಶಯಾಧಾರಿತವಾಗಿ ನೆರವೇರಿತು. ಡಯಟ್ ಪ್ರಾಧ್ಯಾಪಕರಾದ ಶ್ರೀ ಕೆ ರಮೇಶ್ ರವರು ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಡಯಟಿನ ಶ್ರೀ ಕೃಷ್ಣ ಕಾರಂತ್,  ಶ್ರೀ ಶಶಿಧರ್,  ಶ್ರೀ ನಾರಾಯಣ ದೇಲಂಪಾಡಿ  ಮತ್ತು ಪ್ರಥಮ ವರ್ಷದ ವಿದ್ಯಾರ್ಥಿನಿ ಕುಮಾರಿ ಸಚಿತಾ ರೈ  ಶುಭಾಶಂಸನೆಯನ್ನು ನೆರವೇರಿಸಿದರು.  ಇದೇ ಸಂದರ್ಭದಲ್ಲಿ ಪ್ರಥಮ ವರ್ಷದ ಅಧ್ಯಾಪಕ ವಿದ್ಯಾರ್ಥಿಗಳು ತಯಾರಿಸಿದ ಬೊಲ್ಪು ಎ೦ಬ ತುಳು ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಅಧ್ಯಾಪಕ ವಿದ್ಯಾರ್ಥಿಗಳು ತುಳು ಸಂಸ್ಕೃತಿಯ ಬಗೆಗಿನ ಪ್ರಬಂಧಗಳನ್ನು ದೃಶ್ಯ ಶ್ರಾವ್ಯ ಹಿನ್ನೆಲೆಯೊಂದಿಗೆ ಆಕರ್ಷಕವಾಗಿ ಮಂಡಿಸಿದರು. ಅದೇ ರೀತಿ ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದ ಹಾಡುಗಳು, ಪಾಡ್ದನ, ನಾಟಕ, ಒಗಟುಗಳು, ಎದುರುಕಥೆ  ಇತ್ಯಾದಿಗಳನ್ನು  ಉತ್ತಮ ರೀತಿಯಲ್ಲಿ ಪ್ರಸ್ತುತಪಡಿಸಿದರು. ಸಂಪೂರ್ಣ ತುಳು ಭಾಷೆಯಲ್ಲಿಯೇ ನಡೆದ ಈ ಕಾರ್ಯಕ್ರಮವು ಎಲ್ಲಾ ಅಧ್ಯಾಪಕ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯಿಂದ ಅತ್ಯುತ್ತಮವಾಗಿ ಮೂಡಿಬಂತು. ಕುಮಾರಿ ವಿದ್ಯಾ ಜಿ. ಕೆ. ಸ್ವಾಗತಿಸಿ ಶೈಲೇಶ್. ಎ೦ ಧನ್ಯವಾದವಿತ್ತ ಈ ಕಾರ್ಯಕ್ರಮವನ್ನು ಕಿಶೋರ್ ಕುಮಾರ್, ದೇವಾನಂದ ಕೆ ಮತ್ತು ಕುಮಾರಿ ಪೂರ್ಣಿಮಾ ಶೆಟ್ಟಿ ನಿರ್ವಹಿಸಿದರು.

ಕಣ್ಮರೆಯಾಗುತ್ತಿರುವ ಗ್ರಾಮೀಣ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದುದು ಕಾಲದ ಅಗತ್ಯ-ಯತೀಶ್ ಕುಮಾರ್ ರೈ

           ನಿಲೇಶ್ವರದಿಂದ ಬಾರ್ಕೂರಿನ ವರೆಗೆ ವ್ಯಾಪಿಸಿರುವ ನಮ್ಮ ತುಳುನಾಡು ಸಮೃದ್ಧವಾದ ಸಂಸ್ಕೃತಿಯ ನೆಲೆಬೀಡು. ಮಾನವೀಯತೆಗೆ ಅತ್ಯುನ್ನತ ಸ್ಥಾನವನ್ನು ಕಲ್ಪಿಸಿದ ತುಳುವರು ತಮ್ಮ ಅಸ್ತಿತ್ವದುದ್ದಕ್ಕೂ ವಿಶಿಷ್ಟವಾದ ಆಚರಣೆ ಮತ್ತು ಅನುಷ್ಠಾನಗಳಿಂದ ತಮ್ಮ ಪ್ರತೇಕತೆಯನ್ನು ತೋರಿಸಿಕೊಟ್ಟವರು. ನಮ್ಮಲ್ಲಿ ಆಟಿ ತಿಂಗಳಿಗೆ ಅತೀವ ಮಹತ್ವ. ತಮ್ಮ ಕೃಷಿ ಕೆಲಸಗಳಿಗೆ ವಿರಾಮ ಸಿಗುವಂತಹ ಆಟಿ ತಿಂಗಳಿನಲ್ಲಿ ಅನೇಕ ಆಚಾರ ವಿಚಾರಗಳನ್ನು ತುಳುನಾಡಿನಲ್ಲಿ ನಡೆಸಿಕೊಂಡು ಬರುತ್ತಾರೆ. ಆಟಿ ಕಳಂಜನು ಊರಿನ ಮಾರಿಯನ್ನು ಕಳೆಯಲು ಈ ಸಮಯದಲ್ಲಿ ತುಳುನಾಡಿಗೆ ಬರುತ್ತಾನೆ. ಚೆನ್ನೆಮಣೆ, ಹಿರಿಯರಿಗೆ ಬಡಿಸುವುದು ಇತ್ಯಾದಿ ಈ ಸಮಯದ ಆಚರಣೆಗಳು. ಮೂಲತಃ ಬಡತನದಿಂದಿದ್ದ ಗ್ರಾಮೀಣ ತುಳುವರು ಆನೇಕ ಪ್ರಕೃತಿ ಜನ್ಯವಾದ ಆಹಾರವಸ್ತುಗಳನ್ನು ಈ ಸಮಯದಲ್ಲಿ ಉಪಯೋಗಿಸುತ್ತಿದ್ದರು. ಕಣ್ಮರೆಯಾಗುತ್ತಿರುವ ಇಂತಹ ಗ್ರಾಮೀಣ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದುದು ಇಂದಿನ ಅಗತ್ಯ ಎ೦ದು ಎಸ್. ಎಸ್. ಎ. ಜಿಲ್ಲಾ ಪ್ರೋಗ್ರಾಮ್ ಓಫೀಸರ್ ಶ್ರೀ ಯತೀಶ್ ಕುಮಾರ್ ರೈ  ಹೇಳಿದರು.  ಡಯಟ್ ಮಾಯಿಪ್ಪಾಡಿಯಲ್ಲಿ ಜರಗಿದ ಆಟಿಡೊಂಜಿ ದಿನ-ತುಳು ಸಾಹಿತ್ಯ ಸಂಸ್ಕೃತಿ ಆಧಾರಿತ ವಿನೂತನ ಕಾರ್ಯಕ್ರಮವನ್ನು ದಿನಾಂಕ 13. 08.2014ರಂದು ಉದ್ಘಾಟಿಸಿ ಅವರು ಈ ಮಾತನಾಡುತ್ತಿದ್ದರು. ಡಯಟಿನ ಕನ್ನಡ ವಿಭಾಗದ ಅಧ್ಯಾಪಕ ವಿದ್ಯಾರ್ಥಿಗಳ ಈ ಪ್ರಯತ್ನವನ್ನು ಅವರು ಅಭಿನಂದಿಸಿದರು.
ಎಸ್. ಎಸ್. ಎ. ಮಂಜೇಶ್ವರ ಬ್ಲೋಕ್ ತರಬೇತುದಾರರಾದ ಶ್ರೀ ವಿಜಯ ಕುಮಾರ್ ಪಾವಳರವರು ಮುಖ್ಯ ಅತಿಥಿಗಳಾಗಿದ್ದರು. ಡಯಟ್ ಪ್ರಾಧ್ಯಾಪಕರಾದ ಶ್ರೀ ಕೆ ರಮೇಶ್ ರವರು ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಕಾರ್ಯಕ್ರಮದಲ್ಲಿ ಡಯಟಿನ ಶ್ರೀ ಸುಬ್ರಹ್ಮಣ್ಯ, ಡಾ.ರಘುರಾಮ್ ಭಟ್, ಶ್ರೀ ಕೃಷ್ಣ ಕಾರಂತ್, ಶಶಿಧರ ಎ೦,  ಹಾಗು ಪಿ.ಟಿ.ಎ. ಅಧ್ಯಕ್ಷರಾದ ಶ್ರೀ ಗಿರೀಶ್ ರವರು ಶುಭಾಶಂಸನೆಯನ್ನು ನೆರವೇರಿಸಿದರು. ನಾರಾಯಣ ದೇಲಂಪಾಡಿ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಅಧ್ಯಾಪಕ ವಿದ್ಯಾರ್ಥಿನಿಯಾದ ಕುಮಾರಿ ಪೂರ್ಣಿಮಾ ಶೆಟ್ಟಿ ಧನ್ಯವಾದವಿತ್ತರು.
ಅಧ್ಯಾಪಕ ವಿದ್ಯಾರ್ಥಿಗಳು ತಾವೇ ಸ್ವತಃ ತಯಾರಿಸಿದ ಪತ್ರೊಡೆ, ಉಂಡಲಕ, ಬೇಳಕ್ಕ ಮೆಣಸು, ಕೆಸುವಿನ ಚಟ್ನಿ, ಕೂಂಬೆ ಚಟ್ನಿ, ಸಜೆಂಕಿನ ಇಡ್ಲಿ, ಬೆಲ್ಲದುಂಡೆ, ಸಾಂತಾಣಿ, ಕೆಸುವಿನ ಕಡುಬು, ನುಗ್ಗೆ ಸೊಪ್ಪಿನ ಚಟ್ನಿ ಮತ್ತು ಕಡುಬು ಇತ್ಯಾದಿ ಸುಮಾರು ಐವತ್ತಕ್ಕಿಂತಲೂ ಹೆಚ್ಚು ಗ್ರಾಮೀಣ ಆಹಾರ ಪದಾರ್ಥಗಳು ಪ್ರದರ್ಶನಕ್ಕಿದ್ದುವು. ವಿದ್ಯಾರ್ಥಿಗಳು ಈ ಆಹಾರ ಪದಾರ್ಥಗಳ ತಯಾರಿಯ ವಿಧಾನ ಮತ್ತು ವಿಶೇಷತೆಗಳ ಬಗ್ಗೆ ವಿವರಿಸಿದರು. 

Monday, August 11, 2014

ಡಯಟ್ ನಲ್ಲಿ  ರಂಗೋಲಿ ಸ್ಪರ್ಧೆ 


ಡಯಟ್ ಕಾಸರಗೋಡು, ಮಾಯಿಪ್ಪಾಡಿ ಯಲ್ಲಿ ದ್ವಿತೀಯ ವರ್ಷ D.Ed Kannada ಅಧ್ಯಾಪಕ ವಿದ್ಯಾರ್ಥಿ ಗಳಿಂದ ಕಲಾ ಶಿಕ್ಷಣದ ಭಾಗವಾಗಿ ರಂಗೋಲಿ ಸ್ಪರ್ಧೆ ಜರಗಿತು .