Friday, August 15, 2014

ಡಯಟ್ ಕಾಸರಗೋಡು, ಮಾಯಿಪ್ಪಾಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ 

ಡಯಟ್ ಕಾಸರಗೋಡು, ಮಾಯಿಪ್ಪಾಡಿಯಲ್ಲಿ ಸ್ವಾತಂತ್ರ್ಯ ದಿನದ ಅಂಗವಾಗಿ ಹಲವು ಕಾರ್ಯಕ್ರಮಗಳು ಜರಗಿತು. ಬೆಳಗ್ಗೆ 9.30 ಕ್ಕೆ ದ್ವಜರೊಹಣ, ದೇಶಭಕ್ತಿ ಗೀತೆ , ರಸಪ್ರಶ್ನೆ ಮುಂತಾದ ಸ್ಪರ್ಧೆ ಗಳು ಜರಗಿತು. ಶಿವಾಜಿ ಫ್ರೆಂಡ್ಸ್ ಕ್ಲಬ್ ನ ಭಾಗವಾಗಿ ಮಕ್ಕಳಿಗೆ ಸಿಹಿ ತಿಂಡಿ ಒದಗಿಸಲೈತು.


ದ್ರಾವಿಡ ಭಾಷೆಗಳಲ್ಲಿ ತುಳು ಭಾಷೆಗೆ ಪ್ರಧಾನ ಸ್ಥಾನವಿದೆ-
 ಡಾ. ರಘುರಾಮ್ ಭಟ್ 

                 ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಇಂದು ಸಾಹಿತ್ಯ ಕ್ಷೇತ್ರದಲ್ಲಿ ಇತರ ದ್ರಾವಿಡ ಭಾಷೆಗಳ ಹಂತಕ್ಕೆ ತಲುಪದಿದ್ದರೂ ವಿಶಿಷ್ಟತೆಯಿಂದ ತನ್ನದೇ ಆದ ಸಮೃದ್ಧವಾದ ಜನಪದ ಮತ್ತು ಇತರ ಸಾಹಿತ್ಯ ಸೃಷ್ಟಿಗಳಿಂದಾಗಿ ಇಂದು ಕೂಡ ಪ್ರಧಾನ ಸ್ಥಾನವನ್ನು ಉಳಿಸಿಕೊಂಡಿದೆ ಎ೦ದು ಡಯಟ್ ಪ್ರಾಧ್ಯಾಪಕರಾದ ಡಾ.ರಘುರಾಮ್ ಭಟ್ ಹೇಳಿದರು. ದಿನಾಂಕ 13. 08.2014ರಂದು ಮಾಯಿಪ್ಪಾಡಿ ಡಯಟಿನಲ್ಲಿ ನಡೆದ ದ್ವಿತೀಯ ವರ್ಷದ ಕನ್ನಡ ವಿಭಾಗದ ಅಧ್ಯಾಪಕ ವಿದ್ಯಾರ್ಥಿಗಳ ಸಾಹಿತ್ಯ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಈ ಸಾಹಿತ್ಯ ಸಭೆಯು 'ತುಳು ಸಾಹಿತ್ಯ ಮತ್ತು ಸಂಸ್ಕೃತಿ'  ಎ೦ಬ ಆಶಯಾಧಾರಿತವಾಗಿ ನೆರವೇರಿತು. ಡಯಟ್ ಪ್ರಾಧ್ಯಾಪಕರಾದ ಶ್ರೀ ಕೆ ರಮೇಶ್ ರವರು ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಡಯಟಿನ ಶ್ರೀ ಕೃಷ್ಣ ಕಾರಂತ್,  ಶ್ರೀ ಶಶಿಧರ್,  ಶ್ರೀ ನಾರಾಯಣ ದೇಲಂಪಾಡಿ  ಮತ್ತು ಪ್ರಥಮ ವರ್ಷದ ವಿದ್ಯಾರ್ಥಿನಿ ಕುಮಾರಿ ಸಚಿತಾ ರೈ  ಶುಭಾಶಂಸನೆಯನ್ನು ನೆರವೇರಿಸಿದರು.  ಇದೇ ಸಂದರ್ಭದಲ್ಲಿ ಪ್ರಥಮ ವರ್ಷದ ಅಧ್ಯಾಪಕ ವಿದ್ಯಾರ್ಥಿಗಳು ತಯಾರಿಸಿದ ಬೊಲ್ಪು ಎ೦ಬ ತುಳು ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಅಧ್ಯಾಪಕ ವಿದ್ಯಾರ್ಥಿಗಳು ತುಳು ಸಂಸ್ಕೃತಿಯ ಬಗೆಗಿನ ಪ್ರಬಂಧಗಳನ್ನು ದೃಶ್ಯ ಶ್ರಾವ್ಯ ಹಿನ್ನೆಲೆಯೊಂದಿಗೆ ಆಕರ್ಷಕವಾಗಿ ಮಂಡಿಸಿದರು. ಅದೇ ರೀತಿ ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದ ಹಾಡುಗಳು, ಪಾಡ್ದನ, ನಾಟಕ, ಒಗಟುಗಳು, ಎದುರುಕಥೆ  ಇತ್ಯಾದಿಗಳನ್ನು  ಉತ್ತಮ ರೀತಿಯಲ್ಲಿ ಪ್ರಸ್ತುತಪಡಿಸಿದರು. ಸಂಪೂರ್ಣ ತುಳು ಭಾಷೆಯಲ್ಲಿಯೇ ನಡೆದ ಈ ಕಾರ್ಯಕ್ರಮವು ಎಲ್ಲಾ ಅಧ್ಯಾಪಕ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯಿಂದ ಅತ್ಯುತ್ತಮವಾಗಿ ಮೂಡಿಬಂತು. ಕುಮಾರಿ ವಿದ್ಯಾ ಜಿ. ಕೆ. ಸ್ವಾಗತಿಸಿ ಶೈಲೇಶ್. ಎ೦ ಧನ್ಯವಾದವಿತ್ತ ಈ ಕಾರ್ಯಕ್ರಮವನ್ನು ಕಿಶೋರ್ ಕುಮಾರ್, ದೇವಾನಂದ ಕೆ ಮತ್ತು ಕುಮಾರಿ ಪೂರ್ಣಿಮಾ ಶೆಟ್ಟಿ ನಿರ್ವಹಿಸಿದರು.

ಕಣ್ಮರೆಯಾಗುತ್ತಿರುವ ಗ್ರಾಮೀಣ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದುದು ಕಾಲದ ಅಗತ್ಯ-ಯತೀಶ್ ಕುಮಾರ್ ರೈ

           ನಿಲೇಶ್ವರದಿಂದ ಬಾರ್ಕೂರಿನ ವರೆಗೆ ವ್ಯಾಪಿಸಿರುವ ನಮ್ಮ ತುಳುನಾಡು ಸಮೃದ್ಧವಾದ ಸಂಸ್ಕೃತಿಯ ನೆಲೆಬೀಡು. ಮಾನವೀಯತೆಗೆ ಅತ್ಯುನ್ನತ ಸ್ಥಾನವನ್ನು ಕಲ್ಪಿಸಿದ ತುಳುವರು ತಮ್ಮ ಅಸ್ತಿತ್ವದುದ್ದಕ್ಕೂ ವಿಶಿಷ್ಟವಾದ ಆಚರಣೆ ಮತ್ತು ಅನುಷ್ಠಾನಗಳಿಂದ ತಮ್ಮ ಪ್ರತೇಕತೆಯನ್ನು ತೋರಿಸಿಕೊಟ್ಟವರು. ನಮ್ಮಲ್ಲಿ ಆಟಿ ತಿಂಗಳಿಗೆ ಅತೀವ ಮಹತ್ವ. ತಮ್ಮ ಕೃಷಿ ಕೆಲಸಗಳಿಗೆ ವಿರಾಮ ಸಿಗುವಂತಹ ಆಟಿ ತಿಂಗಳಿನಲ್ಲಿ ಅನೇಕ ಆಚಾರ ವಿಚಾರಗಳನ್ನು ತುಳುನಾಡಿನಲ್ಲಿ ನಡೆಸಿಕೊಂಡು ಬರುತ್ತಾರೆ. ಆಟಿ ಕಳಂಜನು ಊರಿನ ಮಾರಿಯನ್ನು ಕಳೆಯಲು ಈ ಸಮಯದಲ್ಲಿ ತುಳುನಾಡಿಗೆ ಬರುತ್ತಾನೆ. ಚೆನ್ನೆಮಣೆ, ಹಿರಿಯರಿಗೆ ಬಡಿಸುವುದು ಇತ್ಯಾದಿ ಈ ಸಮಯದ ಆಚರಣೆಗಳು. ಮೂಲತಃ ಬಡತನದಿಂದಿದ್ದ ಗ್ರಾಮೀಣ ತುಳುವರು ಆನೇಕ ಪ್ರಕೃತಿ ಜನ್ಯವಾದ ಆಹಾರವಸ್ತುಗಳನ್ನು ಈ ಸಮಯದಲ್ಲಿ ಉಪಯೋಗಿಸುತ್ತಿದ್ದರು. ಕಣ್ಮರೆಯಾಗುತ್ತಿರುವ ಇಂತಹ ಗ್ರಾಮೀಣ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದುದು ಇಂದಿನ ಅಗತ್ಯ ಎ೦ದು ಎಸ್. ಎಸ್. ಎ. ಜಿಲ್ಲಾ ಪ್ರೋಗ್ರಾಮ್ ಓಫೀಸರ್ ಶ್ರೀ ಯತೀಶ್ ಕುಮಾರ್ ರೈ  ಹೇಳಿದರು.  ಡಯಟ್ ಮಾಯಿಪ್ಪಾಡಿಯಲ್ಲಿ ಜರಗಿದ ಆಟಿಡೊಂಜಿ ದಿನ-ತುಳು ಸಾಹಿತ್ಯ ಸಂಸ್ಕೃತಿ ಆಧಾರಿತ ವಿನೂತನ ಕಾರ್ಯಕ್ರಮವನ್ನು ದಿನಾಂಕ 13. 08.2014ರಂದು ಉದ್ಘಾಟಿಸಿ ಅವರು ಈ ಮಾತನಾಡುತ್ತಿದ್ದರು. ಡಯಟಿನ ಕನ್ನಡ ವಿಭಾಗದ ಅಧ್ಯಾಪಕ ವಿದ್ಯಾರ್ಥಿಗಳ ಈ ಪ್ರಯತ್ನವನ್ನು ಅವರು ಅಭಿನಂದಿಸಿದರು.
ಎಸ್. ಎಸ್. ಎ. ಮಂಜೇಶ್ವರ ಬ್ಲೋಕ್ ತರಬೇತುದಾರರಾದ ಶ್ರೀ ವಿಜಯ ಕುಮಾರ್ ಪಾವಳರವರು ಮುಖ್ಯ ಅತಿಥಿಗಳಾಗಿದ್ದರು. ಡಯಟ್ ಪ್ರಾಧ್ಯಾಪಕರಾದ ಶ್ರೀ ಕೆ ರಮೇಶ್ ರವರು ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಕಾರ್ಯಕ್ರಮದಲ್ಲಿ ಡಯಟಿನ ಶ್ರೀ ಸುಬ್ರಹ್ಮಣ್ಯ, ಡಾ.ರಘುರಾಮ್ ಭಟ್, ಶ್ರೀ ಕೃಷ್ಣ ಕಾರಂತ್, ಶಶಿಧರ ಎ೦,  ಹಾಗು ಪಿ.ಟಿ.ಎ. ಅಧ್ಯಕ್ಷರಾದ ಶ್ರೀ ಗಿರೀಶ್ ರವರು ಶುಭಾಶಂಸನೆಯನ್ನು ನೆರವೇರಿಸಿದರು. ನಾರಾಯಣ ದೇಲಂಪಾಡಿ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಅಧ್ಯಾಪಕ ವಿದ್ಯಾರ್ಥಿನಿಯಾದ ಕುಮಾರಿ ಪೂರ್ಣಿಮಾ ಶೆಟ್ಟಿ ಧನ್ಯವಾದವಿತ್ತರು.
ಅಧ್ಯಾಪಕ ವಿದ್ಯಾರ್ಥಿಗಳು ತಾವೇ ಸ್ವತಃ ತಯಾರಿಸಿದ ಪತ್ರೊಡೆ, ಉಂಡಲಕ, ಬೇಳಕ್ಕ ಮೆಣಸು, ಕೆಸುವಿನ ಚಟ್ನಿ, ಕೂಂಬೆ ಚಟ್ನಿ, ಸಜೆಂಕಿನ ಇಡ್ಲಿ, ಬೆಲ್ಲದುಂಡೆ, ಸಾಂತಾಣಿ, ಕೆಸುವಿನ ಕಡುಬು, ನುಗ್ಗೆ ಸೊಪ್ಪಿನ ಚಟ್ನಿ ಮತ್ತು ಕಡುಬು ಇತ್ಯಾದಿ ಸುಮಾರು ಐವತ್ತಕ್ಕಿಂತಲೂ ಹೆಚ್ಚು ಗ್ರಾಮೀಣ ಆಹಾರ ಪದಾರ್ಥಗಳು ಪ್ರದರ್ಶನಕ್ಕಿದ್ದುವು. ವಿದ್ಯಾರ್ಥಿಗಳು ಈ ಆಹಾರ ಪದಾರ್ಥಗಳ ತಯಾರಿಯ ವಿಧಾನ ಮತ್ತು ವಿಶೇಷತೆಗಳ ಬಗ್ಗೆ ವಿವರಿಸಿದರು. 

Monday, August 11, 2014

ಡಯಟ್ ನಲ್ಲಿ  ರಂಗೋಲಿ ಸ್ಪರ್ಧೆ 


ಡಯಟ್ ಕಾಸರಗೋಡು, ಮಾಯಿಪ್ಪಾಡಿ ಯಲ್ಲಿ ದ್ವಿತೀಯ ವರ್ಷ D.Ed Kannada ಅಧ್ಯಾಪಕ ವಿದ್ಯಾರ್ಥಿ ಗಳಿಂದ ಕಲಾ ಶಿಕ್ಷಣದ ಭಾಗವಾಗಿ ರಂಗೋಲಿ ಸ್ಪರ್ಧೆ ಜರಗಿತು . 






Wednesday, August 6, 2014

ಹಿರೋಷಿಮಾ ದಿನಾಚರಣೆ ಮತ್ತು ಸಮಾಜ ವಿಜ್ಞಾನ ಕ್ಲಬ್ ಉದ್ಗಾಟನೆ @ ಡಯಟ್ 


ತಾರೀಕು ೬/೮/೨೦೧೪ ರ ಬುಧವಾರ ದಂದು ಡಯಟ್ ಮಾಯ್ಪಾಡಿ ಯಲ್ಲಿ ಹಿರೋಷಿಮಾ ದಿನಾಚರಣೆಯನ್ನು ಆಚರಿಸಲಿತು . ಹಾಗು ಸಮಾಜ ವಿಜ್ಞಾನ ಕ್ಲಬ್ ಉದ್ಗಾಟನೆಯು ಜರಗಿತು