Thursday, July 24, 2014

ಕಾರ್ಗಿಲ್ ಯುದ್ಧ




ಕಾರ್ಗಿಲ್ ಸಂಘರ್ಷ ವೆಂದೇ ಹೆಸರಾದ ಕಾರ್ಗಿಲ್ ಯುದ್ದವು ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆದ ಸಶಸ್ತ್ರ ಸಂಘರ್ಷವಾಗಿದ್ದು, ಕಾಶ್ಮೀರದ ಕಾರ್ಗಿಲ್ಜಿಲ್ಲೆ ಮತ್ತು ನಿಯಂತ್ರಣ ರೇಖೆಯಿರುವ ಪ್ರದೇಶಗಳಲ್ಲಿ 1999ರ ಮೇ ಮತ್ತು ಜುಲೈ ನಡುವೆ ಸಂಭವಿಸಿತು. ಉಭಯ ರಾಷ್ಟ್ರಗಳ ನಡುವಿನ de facto ಗಡಿಯಾಗಿರುವನಿಯಂತ್ರಣ ರೇಖೆಯಲ್ಲಿ(LOC)ರುವ ಭಾರತದ ನೆಲೆಗಳಿಗೆ ಪಾಕಿಸ್ತಾನದ ಸೈನಿಕರು ಮತ್ತು ಕಾಶ್ಮೀರಿ ಉಗ್ರಗಾಮಿಗಳು ನುಸುಳಿದ್ದೇ ಯುದ್ಧಕ್ಕೆ ಕಾರಣ. ಯುದ್ಧದ ಆರಂಭದ ಹಂತಗಳಲ್ಲಿ, ಕಾರ್ಗಿಲ್ ಕದನಕ್ಕೆ ಸ್ವತಂತ್ರ ಕಾಶ್ಮೀರಿ ಉಗ್ರಗಾಮಿಗಳ ಮೇಲೆ ಪಾಕಿಸ್ತಾನ ಗೂಬೆ ಕೂರಿಸಿತು, ಆದರೆ ಯುದ್ಧಾನಂತರದ ಸಾವು ನೋವುಗಳದಾಖಲೆಗಳು ಮತ್ತು ಆ ಬಳಿಕ ಪಾಕಿಸ್ತಾನದ ಪ್ರಧಾನ ಮಂತ್ರಿ ಮತ್ತು ಸೇನಾ ಸಿಬ್ಬಂದಿ ಮುಖ್ಯಸ್ಥರು ನೀಡಿದ ಹೇಳಿಕೆಗಳು, ಜನರಲ್ ಅಶ್ರಫ್ ರಷೀದ್ ನೇತೃತ್ವದ ಪಾಕಿಸ್ತಾನಿ ಅರೆಸೇನೆ ಪಡೆಗಳು ಈ ಯುದ್ಧದಲ್ಲಿ ಪಾಲ್ಗೊಂಡಿದ್ದನ್ನು ರುಜುವಾತು ಮಾಡಿತು. ಪಾಕಿಸ್ತಾನದ ಪಡೆಗಳು ಮತ್ತು ಉಗ್ರಗಾಮಿಗಳು LoCಯಲ್ಲಿ ಆಕ್ರಮಿಸಿಕೊಂಡ ಭಾರತದ ಬಹುತೇಕ ನೆಲೆಗಳನ್ನು ಬಳಿಕ ಭಾರತದ ಸೇನೆಯು ಭಾರತೀಯ ವಾಯು ಪಡೆಯ ಬೆಂಬಲದೊಂದಿಗೆ ಮರುವಶಕ್ಕೆ ತೆಗೆದುಕೊಂಡಿತು. ಅಂತಾರಾಷ್ಟ್ರೀಯವಾಗಿ ರಾಜತಾಂತ್ರಿಕ ವಿರೋಧ ವ್ಯಕ್ತವಾಗಿದ್ದರಿಂದಾಗಿ, ಪಾಕಿಸ್ತಾನದ ಪಡೆಗಳು LOCಯ ಭಾರತದ ನೆಲೆಗಳಿಂದ ಬಲವಂತವಾಗಿ ಹಿಂದಕ್ಕೆ ಸರಿಯಬೇಕಾಯಿತು.

ಅತೀ ಎತ್ತರದ ಪರ್ವತಚ್ಛಾದಿತ ಪ್ರದೇಶದಲ್ಲಿ ಕಾದಾಟ ಮಾಡಿದಕ್ಕೆ ಈ ಯುದ್ಧ ಇತ್ತೀಚಿನ ಉದಾಹರಣೆಯಾಗಿದ್ದು, ಉಭಯ ಕಡೆಗಳೂ ಗಣನೀಯವಾಗಿ ಸೈನ್ಯ ವ್ಯವಸ್ಥಾಪನಾ ತಂತ್ರದ ಸಮಸ್ಯೆಗಳನ್ನು ಎದುರಿಸಬೇಕಾಯಿತು.1969ರಲ್ಲಿ ಚೀನಾ-ಸೋವಿಯಟ್ ಗಡಿ ಸಂಘರ್ಷದ ನಂತರ, ಯಾವುದೇ ಎರಡು ರಾಷ್ಟ್ರಗಳುಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸಿದ ಬಳಿಕ ಅವುಗಳ ನಡುವೆ ನಡೆದ ಎರಡನೇ ನೇರ ಭೂ-ಯುದ್ಧವಾಗಿದೆ, ಅಲ್ಲದೆ ಬಹು ಇತ್ತೀಚೆಗೆ ನಡೆದ ಯುದ್ಧ ಕೂಡ ಇದೇ ಆಗಿದೆ. (1974ರಲ್ಲೇ ಭಾರತ ಪ್ರಥಮ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದರೂ, ಭಾರತ ಮತ್ತು ಪಾಕಿಸ್ತಾನವೆರಡೂ 1998ರ ಮೇನಲ್ಲಿ ವಿದಳನ ಸಾಧನಗಳ ಸ್ಫೋಟ ಪರೀಕ್ಷೆಗಳನ್ನು ನಡೆಸಿತು). ಈ ಸಂಘರ್ಷ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಳಕ್ಕೆ ಕಾರಣವಾಯಿತು, ಮತ್ತು ಇದರಿಂದಾಗಿ ಭಾರತದ ರಕ್ಷಣಾ ವೆಚ್ಚವೂ ಹೆಚ್ಚಿತು.




Tuesday, July 8, 2014

                                                  

                                                 ಹಿಂದೊಂದು ದಿನ ನಾನಿದ್ದೆ 
                                                 ಒಲವರಿಯದ ಬಾಳ ಕಡಲಿನಲಿ 
                        
                            ಬಾಳೆಂಬ ದೋಣಿಯಲಿ ಪಯಣಿಗರು ನಾವಿಲ್ಲಿ 
                            ನಾವಿಕನಿಲ್ಲದ ದೋಣಿಯ ಮುಂದೆ ಸಾಗಿಸುವುದು ಹೇಗಿಲ್ಲಿ?
                            ಮುಳುಗಿದೆ ಸಂಕೋಚದಲಿ ದಡವ  ನಾ ಹೇಗೆ ಸೇರಲಿ
                            ಅರಿತೆ ನಾ ಆಗ ನಾವಿಕನು  ಬೇಕಿಲ್ಲಿ

                                         ಬಾಳೆಂಬ ಕಡಲಲಿ ಇಳಿದಾಗಿದೆ ನಾನೀಗ
                                         ಸೇರಬೇಕು ದಡವ ಹೇಗಾದರೂ ಇನ್ನೀಗ 
                                         ಕಂಡೆನಾ ಇನ್ನೊಂದು ದೋಣಿಯ 
                                         ಬೇಡಿದೆ ನಾ ಸಹಾಯ ಹಸ್ತವ 
                                         ತಿಳಿದೇ ನಾ ಮಹಾಸತ್ಯವ. 
                                         ಕಂಡನಾ ದೋಣಿಯ ನಾವಿಕ ಇನ್ನೊಂದು ಹಡಗ 
                                         ಇಟ್ಟನಾ ನಾವಿಕನು ಹಡಗಿನಲಿ ಪಾದವ
                                         ಎಕಾಂಗಿಯಾದನು  ಅದರಲಿನ ಪಯಣಿಗನು.   
                                                                                                                  

                                                                         -  ಸರಿತಾ .ವಿ 
                                                                               ಡಯಟ್ maipady